ತುಮಕೂರಿನಲ್ಲಿ ಅಭಿವೃದ್ಧಿಯ ಕ್ರಾಂತಿ!
- ತುಮಕೂರು, ಗುಬ್ಬಿ ಹಾಗೂ ತಿಪಟೂರು ರೈಲ್ವೇ ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.
- ಕಳೆದ ಒಂದು ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಸುಮಾರು ರೂ.650 ಕೋಟಿ ವೆಚ್ಚದಲ್ಲಿ 22 ಮೇಲ್ಸೇತುವೆ / ಕೆಳಸೇತುವೆಗಳನ್ನು (ಆರ್.ಓ.ಬಿ/ಆರ್.ಯು.ಬಿ) ಮಂಜೂರು ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ
- ತುಮಕೂರು ಜಿಲ್ಲೆಯಲ್ಲಿನ ಸುಮಾರು 1,512 ದಿವ್ಯಾಂಗ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆಡಿಪ್ ಯೋಜನೆಯಡಿ ಹೋಬಳಿವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ
- 2024-25ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸುಮಾರು 27,220 ಕೊಬ್ಬರಿ ಬೆಳೆಗಾರರಿಂದ 3.15.076 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತ ಸರ್ಕಾರ ಖರೀದಿ ಮಾಡಿದ್ದು, ಸುಮಾರು ರೂ.378.09 ಕೋಟಿ ಹಣವನ್ನ ಡಿ.ಬಿ.ಟಿ. ಮುಖೇನ ರೈತರ ಖಾತೆಗೆ ನೇರವಾಗಿ ಭಾರತ ಸರ್ಕಾರ ಪಾವತಿಸಿದೆ. ಇದು ಜಿಲ್ಲೆಯ 27,220 ರೈತ ಕುಟುಂಬಗಳಿಗೆ ಅನುಕೂಲವಾಗಿದೆ.ಕರ್ನಾಟಕ ಸರ್ಕಾರ ಕೇವಲ ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಕೇವಲ 2599 ಮೆಟ್ರಿಕ್ ಟನ್ ಮಿಲ್ಲಿಂಗ್ (ಎಣ್ಣೆ) ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ಈ ಸಂದರ್ಭದಲ್ಲಿ ಕೂಡಲೇ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ ಸಿಂಗ್ ಚೌವಾಣ್ ರವರಲ್ಲಿ ಮನವಿ ಮಾಡಿ ತುಮಕೂರು ಜಿಲ್ಲೆಯನ್ನು ಸೇರಿಸಿ ಒಟ್ಟು 10500 ಮೆಟ್ರಿಕ್ ಟನ್ ಮಿಲ್ಲಿಂಗ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಯೋಜನೆಯಡಿಯಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಪ್ರತಿ ವರ್ಷಕ್ಕೆ ರೂ.6000 ರೈತರ ಖಾತೆಗೆ ನೇರವಾಗಿ ತಲುಪಿಸುವ ಯೋಜನೆ. ಪ್ರತಿ ವರ್ಷ 3 ಕಂತುಗಳಲ್ಲಿ ಡಿ.ಬಿ.ಟಿ. ಮುಖೇನ ಅರ್ಹ ರೈತರ ಖಾತೆಗೆ ನೇರವಾಗಿ ಹಣ ತಲುಪಿಸಲಾಗುತ್ತಿದೆ.
- ಪಿ.ಎಮ್ ಕಿಸಾನ್ ಯೋಜನೆಯ ಮುಖೇನ ತುಮಕೂರು ಜಿಲ್ಲೆಯಲ್ಲಿ ಇಲ್ಲಿಯ ತನಕ ರೂ 1,044.27 ಕೋಟಿ ಹಣವನ್ನು 53,857 ರೈತರಿಗೆ ನೀಡಲಾಗಿದೆ.
- ತುಮಕೂರು ಜಿಲ್ಲೆಯ ಅನೇಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಒತ್ತನ್ನು ನೀಡಿದ ಫಲವಾಗಿ ತುಮಕೂರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ರೂ 4,800 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
- ನೆಲಮಂಗಲ - ತುಮಕೂರು ಷಟ್ಟಥ ರಸ್ತೆ; ಸರಣಿ ಅಪಘಾತಗಳಿಗೆ ಕುಖ್ಯಾತಿಯಾಗಿದ್ದ ಈ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 254 ಅಪಘಾತಗಳು ಸಂಭವಿಸಿದ್ದು ನೂರಾರು ಜನರ ಜೀವ ಹಾನಿಯಾಗಿದೆ. ಈ ವಿಷಯವನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾಮಗಾರಿಗೆ ಪುನಃ ಚಾಲನೆ ನೀಡಿ ಕಾಮಗಾರಿ ಪ್ರಾರಂಭವಾಗಿದೆ.
- ರಾಷ್ಟ್ರೀಯ ಹೆದ್ದಾರಿ 150A ಕೆ.ಬಿ ಕ್ರಾಸ್ ನಿಂದ ನೆಲ್ಲಿಗೆರೆವರೆಗೆ 42.26 ಕಿ.ಮಿ ದ್ವಿಪಥ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರಕಿದೆ.
- ರಾಷ್ಟ್ರೀಯ ಹೆದ್ದಾರಿ 206ರ ಮಲ್ಲಸಂದ್ರದಿಂದ ಕರಡಿವರೆಗೆ ಸುಮಾರು 50.645 ಕಿ.ಮಿ ಉದ್ದದ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಶೇ. 98% ಪೂರ್ಣಗೊಂಡಿದೆ.
- ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ ಭಾಗದ ಸುಮಾರು 20.20 ಕಿ.ಮಿ. ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರಕಿದೆ.
- ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗ ಭಾಗದ ಗುಬ್ಬಿ ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಯ 8.50 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ಒಂದು ಬಾರಿ ರಸ್ತೆ ಅಭಿವೃದ್ಧಿ ಯೋಜನೆಯಡಿ ಅನುಮೋದನೆ ದೊರೆತಿದೆ.
- ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು-ಶಿವಮೊಗ್ಗ ಭಾಗದ ತುಮಕೂರು ನಗರದಲ್ಲಿ ಹಾದು ಹೋಗಿರುವ 12.30 ಕಿ.ಮೀ ಹೆದ್ದಾರಿ ಕಾಮಗಾರಿಗೆ ಒಂದು ಬಾರಿ ರಸ್ತೆ ಅಭಿವೃದ್ಧಿ ಯೋಜನೆಯಡಿ ಮಂಜೂರಾತಿ ದೊರೆತಿದೆ.
- ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ 206ರ ಕೆ.ಬಿ ಕ್ರಾಸ್ ಬಳಿ 2.2 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಸಂಬಂಧ ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುವ ಮೂಲಕ ಮರು ಚಾಲನೆ ನೀಡಲಾಗಿದೆ.
ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಬಿಡುಗಡೆಯಾದ ಅನುದಾನದ ವಿವರ:
- SMI ಯೋಜನೆಯಡಿಯಲ್ಲಿ ತುಮಕೂರಿನ ಕೆರೆಗಳ ಅಭಿವೃದ್ಧಿಗಾಗಿ ರೂ. 90.974 ಕೋಟಿ ಕಾಮಗಾರಿಗೆ ಅನುಮೋದನೆ ದೊರೆತಿದೆ..
- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿಯಲ್ಲಿ 5358 ಫಲಾನುಭವಿಗಳಿಗೆ ರೂ.16 ಕೋಟಿ ಅನುದಾನ ನೀಡಲಾಗಿದೆ.
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಗ್ರಾಮೀಣಾಭಿವೃದ್ಧಿ)ಯಡಿಯಲ್ಲಿ ರೂ 22.93 ಕೋಟಿ ಅನುದಾನ ನೀಡಲಾಗಿದೆ.
- ಪೋಷಣ್ ಅಭಿಯಾನ ಕಾರ್ಯಕ್ರಮ ಯೋಜನೆಯಡಿಯಲ್ಲಿ ರೂ 20.450 ಕೋಟಿ ಅನುದಾನ ನೀಡಲಾಗಿದೆ.
- ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ರೂ 2.08 ಕೋಟಿ ಅನುದಾನ ನೀಡಲಾಗಿದೆ.
- ಸ್ವಚ್ಚ ಭಾರತ್ ಮಿಶನ್ (ಗ್ರಾ) ಯೋಜನೆಯಡಿಯಲ್ಲಿ ರೂ 3.57 ಕೋಟಿ ಅನುದಾನ ನೀಡಲಾಗಿದೆ.
- ಜಲ್ ಜೀವನ್ ಮಿಶನ್ ಯೋಜನೆಯಡಿಯಲ್ಲಿ 39,1355 ಫಲಾನುಭವಿಗಳಿಗೆ ರೂ 19.85 ಕೋಟಿ ಅನುದಾನ ಒದಗಿಸಿದೆ.
- ತುಮಕೂರು - ದಾವಣಗೆರೆ ರೈಲ್ವೆ ಲೈನ್ : 192 ಕಿ.ಮೀ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ.
- ತುಮಕೂರು – ರಾಯದುರ್ಗ ರೈಲ್ವೆ ಲೈನ್ : 113 ಕಿ.ಮೀ. ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ.
- ತುಮಕೂರು ಜಿಲ್ಲೆಯಲ್ಲಿನ 28 ಮೇಲ್ಸೇತುವೆ (ಆರ್.ಒ.ಬಿ) ಮತ್ತು ಕೆಳಸೇತುವೆ (ಆರ್.ಯು.ಬಿ)ಗಳನ್ನು ಸುಮಾರು ರೂ.1೦೦೦ ಕೋಟಿ ವೆಚ್ಚದ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ.
- ತುಮಕೂರು ವಿಶ್ವವಿದ್ಯಾಲಯದಲ್ಲಿ ರೂ.2೦ ಕೋಟಿ ವೆಚ್ಚದಲ್ಲಿ ಮಹಿಳೆಯರಿಗಾಗಿ ವಸತಿ ನಿಲಯ ಮಂಜೂರುಗೊಳಿಸಲಾಗಿದೆ.
- ವಸಂತನರಸಾಪುರದಲ್ಲಿ ಕಾರ್ಯನಿರತ ಮಹಿಳೆಯರಿಗಾಗಿ ವಸತಿ ನಿಲಯ ರೂ. 2೦ ಕೋಟಿ ವೆಚ್ಚ - ಕಾಮಗಾರಿ ಪ್ರಗತಿಯಲ್ಲಿದೆ.
- ವಸಂತನರಸಾಪುರದಲ್ಲಿ 5 ಎಕರೆ ಜಾಗದಲ್ಲಿ 1೦೦ ಹಾಸಿಗೆಯ ಎ.ಎಸ್.ಐ ಆಸ್ಪತ್ರೆ ನಿರ್ಮಿಸಲು ಭಾರತ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆದಿದೆ.
- ತುಮಕೂರು ನಗರದಲ್ಲಿ ಒನ್ ಟೈಂ ಇಂಪ್ರೂವ್ ಮೆಂಟ್ ರಸ್ತೆ ಅಭಿವೃದ್ಧಿಗೆ ರೂ 85.48 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
- ಜಲಶಕ್ತಿ ಇಲಾಖೆಯಿಂದ ತುಮಕೂರು ಜಿಲ್ಲೆಯಲ್ಲಿ ಒಟ್ಟು 26 ಕಾಮಗಾರಿಗಳು ಪಿ.ಎಂ.ಕೆ.ಎಸ್.ವೈ ಯೋಜನೆಯಡಿ ನಡೆಯುತ್ತಿವೆ.
- ಕ್ಯಾತ್ಸಂದ್ರ ಶಾಲೆಯನ್ನು ಸಿ.ಎಸ್.ಆರ್ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು.
- ಟೊಯೋಟಾ ಕಂಪನಿಯಿಂದ ಗುಬ್ಬಿಯ ಗೊಲ್ಲರಹಟ್ಟಿಗಳಲ್ಲಿ 13 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗಿದೆ.
- ಕೊರಟಗೆರೆ ತಾಲೂಕಿನ ತುಂಬಾಡಿಯಲ್ಲಿ ಶಿಥಿಲವಾಗಿದ್ದ ಶಾಲಾ ಕಟ್ಟಡವನ್ನು ಸಂಸದರ ಅನುದಾನದಡಿಯಲ್ಲಿ ನವೀಕರಣ ಮಾಡಲಾಗುತ್ತಿದೆ.